2028ಕ್ಕೆ ಹರೀಶ್ ಪೂಂಜಾ “ರಾಜಕೀಯ ಪರ್ವ” ಮುಗಿಯುತ್ತಾ..?

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜನಪ್ರಿಯ ಶಾಸಕ ಅನ್ನೋದರಲ್ಲಿ ಎರಡು ಮಾತಿಲ್ಲ.. ಅವರು ಜನಪ್ರಿಯ (ಶಾಸಕ ) ನಾಯಕ ಹೇಗಾದ್ರೂ, ಯಾವ ಅರ್ಥದಲ್ಲಿ ಅನ್ನೋದು ಕೂಡ ಸದ್ಯದ ಕಾಲಘಟ್ಟದಲ್ಲಿ ಮುಖ್ಯವಾಗುತ್ತೆ. ಸುಮಾರು ಐದು ಬಾರಿ ಶಾಸಕರಾಗಿದ್ದ ದಿ. ವಸಂತ ಬಂಗೇರರನ್ನು ಸೋಲಿಸೋದು ಸುಲಭದ ಮಾತಗಿರಲಿಲ್ಲ, ಅಷ್ಟರ ಮಟ್ಟಿಗೆ ಬಂಗೇರರ ವರ್ಚಸ್ಸು ಬೆಳ್ತಂಗಡಿಯಲ್ಲಿ ಹಾಸುಹೊಕ್ಕಾಗಿತ್ತು, ಕಾಂಗ್ರೆಸಿಗರು ಪಕ್ಕಕ್ಕೆ ಇರಲಿ ಸ್ವತಃ ಬಿಜೆಪಿ ಕಾರ್ಯಕರ್ತರೇ ಬಂಗೇರರನ್ನು ಗೌರವದ ದೃಷ್ಟಿಯಲ್ಲಿ ನೋಡುತ್ತಿದ್ದರು, ಆದ್ರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಹರೀಶ್ ಪೂಂಜಾ ವಿರುದ್ಧ […]

ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ಚಿತ್ರೀಕರಣ: ಯೂಟ್ಯೂಬರ್​​ಗೆ ಶಾಕ್​​ ಕೊಟ್ಟ ಇಲಾಖೆ

ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಯೂಟ್ಯೂಬರ್ ಅಕ್ರಮ ಪ್ರವೇಶ ಮಾಡಿ, ಡ್ರೋನ್ ಬಳಸಿ ಚಿತ್ರೀಕರಣ ಮಾಡಿದ ಕಾರಣ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆರ್‌ಎಫ್‌ಒ , ಆರೋಪಿತ ವ್ಯಕ್ತಿ ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾನೆ . ಡ್ರೋನ್ ಹಾಗೂ ವಿಡಿಯೋ ಕ್ಯಾಮೆರಾವನ್ನು ತರಿಸಿ ಸಂಪೂರ್ಣ ಪರಿಶೀಲನೆ ನಡೆಸಿ ದೃಶ್ಯಗಳನ್ನು ಡಿಲೀಟ್​​ ಮಾಡುವಂತೆ ಇಲಾಖೆ ಸೂಚಿಸಿದೆ ಎಂದು […]

ಮೋಜು ಮಸ್ತಿಗಾಗಿ ಅರಣ್ಯ ಅಧಿಕಾರಿಗಳಿಂದಲೇ ಮರಗಳ ಮಾರಣ ಹೋಮ? ತನಿಖೆಗೆ ಆದೇಶ

ಉತ್ತರ ಕನ್ನಡದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳೇ ಮೋಜು ಮಸ್ತಿಗಾಗಿ ಅಕ್ರಮವಾಗಿ ಮರ ಕಡಿದು ಪ್ಯಾರಾಗೋಲಾ ನಿರ್ಮಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ವನ್ಯಜೀವಿ ಸಂರಕ್ಷಣಾಕಾಯ್ದೆ-1972ರ ಉಲ್ಲಂಘಿಸಿ ಮರಗಳ ಮಾರಣ ಹೋಮ ಮಾಡಲಾಗಿರುವ ಕಾರಣ, ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಿರಿಯ ಅರಣ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ. ಉತ್ತರ ಕನ್ನಡ, ಜನವರಿ 21: ಮೋಜು ಮಸ್ತಿ, ಪಾರ್ಟಿ ಮಾಡಲು ಅರಣ್ಯ ಅಧಿಕಾರಿಗಳೇ ಮರಗಳ ಮಾರಣ ಹೋಮ ಮಾಡಿ ಕಾಳಿ ಹುಲಿ ಸಂರಕ್ಷಿತ […]

ಕರಾವಳಿಯಲ್ಲಿ ಮತ್ತೆ ಎಂಡೋಸಲ್ಫಾನ್ ಭೀತಿ: ಆರೋಗ್ಯ ಇಲಾಖೆಯಿಂದ ಆಘಾತಕಾರಿ ವರದಿ

ಕರ್ನಾಟಕ ಕರಾವಳಿ ಭಾಗದಲ್ಲಿ ಸಾವಿರಾರು ಜನರ ಜೀವ ಹಿಂಡಿದ್ದ ಎಂಡೋಸಲ್ಫಾನ್ ಕರಾಳತೆ ಇದೀಗ ಮೂರನೇ ತಲೆಮಾರಿಗೂ ತಟ್ಟಿದೆ. ಆರೋಗ್ಯ ಇಲಾಖೆಯ ಅದೊಂದು ವರದಿ ಜನರಿಗೆ ಶಾಕ್ ಕೊಟ್ಟಿದೆ. ಇದರಿಂದ ಮತ್ತೆ ಕರಾವಳಿ ಪ್ರದೇಶದ ಜನರಲ್ಲಿ ಎಂಡೋಸಲ್ಫಾನ್ ಭೀತಿ ಎದುರಾಗಿದೆ. ಹಾಗಾದರೆ ವರದಿಯಲ್ಲೇನಿತ್ತು? ಇಲ್ಲಿದೆ ಮಾಹಿತಿ. ಕಾರವಾರ, ಜನವರಿ 23: ಮಹಾಮಾರಿ ಎಂಡೋಸಲ್ಫಾನ್​ (Endosulfan) ಕರಾವಳಿ (Coastal Karnataka) ಭಾಗದ ಸಾವಿರಾರು ಮನೆಗಳ ನೆಮ್ಮದಿಯನ್ನೇ ಕದಡಿತ್ತು. ಗೇರುಬೀಜ ಇಳುವರಿಗೆ ಅಡ್ಡಿಯಾಗಿದ್ದ ಸೊಳ್ಳೆಗಳ ನಾಶಕ್ಕಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್, ಜನರ ಮೇಲೆ ಪರಿಣಾಮ ಬೀರಿತ್ತು. ಹುಟ್ಟುತ್ತಲೇ ಬುದ್ಧಿ ಭ್ರಮಣೆ […]

ಕಾರವಾರ: ವೈರಲ್ ವೀಡಿಯೋಗೆ ಬಲಿಯಾದ ವೈದ್ಯ; ರಾಜೀವ್​ ಪಿಕಳೆ ಕೇಸ್​ನಲ್ಲಿ ಇಬ್ಬರು ಅಂದರ್

ಕಾರವಾರದ ಪ್ರಮುಖ ವೈದ್ಯಕೀಯ ಕುಟುಂಬದ ರಾಜೀವ್ ಪಿಕಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅವಧಿ ಮೀರಿದ ಮಾತ್ರೆ ನೀಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಅವರ ತೇಜೋವಧೆ ಮಾಡಿದ್ದೇ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ವಿಡಿಯೋ ವೈರಲ್ ಮಾಡಿದ ಸುಭಾಷ್ ಮತ್ತು ಹರಿಶ್ಚಂದ್ರ ಎಂಬುವವರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ದುರುಪಯೋಗದ ಗಂಭೀರ ಪರಿಣಾಮಗಳನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ. ಕಾರವಾರ, ಜನವರಿ 24: ಸಾಮಾಜಿಕ,ವೈದ್ಯಕೀಯ ರಂಗದಲ್ಲಿ ಹೆಸರು ಮಾಡಿದ ಕುಟುಂಬಕ್ಕೆ ಸೇರಿದ ರಾಜೀವ್​ […]

ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ಸಂಭ್ರಮ: ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ

ಉಡುಪಿ ಕೃಷ್ಣಮಠದಲ್ಲಿ ಶೀರೂರು ಪರ್ಯಾಯ ಮಹೋತ್ಸವವು ಸಡಗರದಿಂದ ನೆರವೇರಿದೆ. ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿದ್ದು, ಅತ್ಯಂತ ಎಳೆಯ ಪ್ರಾಯದಲ್ಲೇ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾಧಿಕಾರವನ್ನು ಅವರು ನಿರ್ವಹಿಸಲಿದ್ದಾರೆ. ಇದು ಕೃಷ್ಣ ಮಠದ 253ನೇ ಪರ್ಯಾಯ ಮಹೋತ್ಸವವಾಗಿದ್ದು, ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಉಡುಪಿ ಶ್ರೀ ಕೃಷ್ಣಮಠದಲ್ಲಿ ಶೀರೂರು ಪರ್ಯಾಯ ಮಹೋತ್ಸವ ಸಂಭ್ರಮ ಮನೆಮಾಡಿದ್ದು ಬೆಳಗ್ಗಿನ ಜಾವ ನಡೆದ ಅದ್ಧೂರಿ ಮೆರವಣಿಗೆಯನ್ನು ಭಕ್ತರು ರಾತ್ರಿಯಿಡೀ ಕಾದು […]

ಉಡುಪಿ ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ

ಉಡುಪಿ, ಜನವರಿ 20: ಶ್ರೀಕೃಷ್ಣ ಮಠದಲ್ಲಿ ಶೀರೂರು ಪರ್ಯಾಯ ಆರಂಭವಾಗುತ್ತಿದ್ದಂತೆ ಮಠಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಪುರುಷರು ಅಂಗಿ ಬನಿಯನ್ ಧರಿಸಿ ಮಠ ಪ್ರವೇಶಿಸುವಂತಿಲ್ಲ ಮತ್ತು ಬರ್ಮುಡಾ ಸೇರಿ ಬಿಗಿ ಉಡುಪುಗಳಿಗೆ ಅವಕಾಶವಿರುವುದಿಲ್ಲ. ಮಹಿಳೆಯರು ವೆಸ್ಟರ್ನ್​​ ಬಟ್ಟೆಗಳ ಬದಲು ಸಾಂಪ್ರದಾಯಿಕ ಬಟ್ಟೆಯನ್ನು ಧರಿಸಿ ಬರುವಂತೆ ಮಠದ ಆಡಳಿತ ಮಂಡಳಿ ಮನವಿ ಮಾಡಿದೆ. ಪರ್ಯಾಯ ಶೀರೂರು ಸ್ವಾಮೀಜಿಗಳ ಸೂಚನೆಯಮತೆ ನಿನ್ನೆಯಿಂದಲೇ ದೇಗುಲದಲ್ಲಿ ನೂತನ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.ಈ ಹಿಂದೆ ಮಹಾಪೂಜೆ ನಂತರ ಪುರುಷರು ಅಂಗಿ ಮತ್ತು ಬನಿಯನ್ ಧರಿಸಿಯೇ ದೇವರ […]

ಉಡುಪಿಯಲ್ಲಿ ರೋಬೋಸಾಫ್ಟ್ ಝಗಮಗಿಸುವ ಬ್ಯುಲ್ಡಿಂಗ್ ಕಟ್ಟಿದ್ದರ ಹಿಂದಿನ ರಸವತ್ತಾದ ಕಥೆ ಕೇಳಿ

Rohith Bhat of Robosoft speaks in a podcast with Vasanth Shetty: ಸಣ್ಣ ನಗರಗಳಲ್ಲಿ ರೋಬೋಸಾಫ್ಟ್ ಎನ್ನುವ ಐಟಿ ಕಂಪನಿ ತನ್ನ ಉದ್ಯೋಗಿಗಳನ್ನು ಕೆಲಸದಲ್ಲಿ ಉಳಿಸಿಕೊಳ್ಳಲು ಯಾವ ಪಾಡು ಪಟ್ಟಿತು ಗೊತ್ತಾ? ಕಂಪನಿಯ ಸಂಸ್ಥಾಪಕರಾದ ರೋಹಿತ್ ಭಟ್ ಅವರು ವಸಂತ್ ಶೆಟ್ಟಿಯವರ ಪೋಡ್​ಕ್ಯಾಸ್ಟ್​ನಲ್ಲಿ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ಹೈವೇನಲ್ಲಿ ಗ್ಲ್ಯಾಸ್ ಬ್ಯುಲ್ಡಿಂಗ್ ಕಟ್ಟಿದರಂತೆ. ಉಡುಪಿ, ಜನವರಿ 21: ಸಣ್ಣ ಪಟ್ಟಣಗಳಲ್ಲಿ ಓದಿದವರು ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಇಚ್ಛೆ ಹೊಂದಿರುತ್ತಾರೆ. […]

ಖಾಸಗಿ ಬಸ್​​- ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು, 8 ಮಂದಿ ಗಂಭೀರ

ಉಡುಪಿ, ರಾಯಚೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ರಸ್ತೆ ಅಪಘಾತಗಳು ವರದಿಯಾಗಿವೆ. ಉಡುಪಿಯಲ್ಲಿ ಬಸ್-ಕ್ರೂಸರ್ ಡಿಕ್ಕಿಯಲ್ಲಿ ಮೂವರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ರಾಯಚೂರಿನಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದರೆ, ಕೋಲಾರದಲ್ಲಿ ಬೈಕ್‌ಗೆ ಆಟೋ ಡಿಕ್ಕಿ ಹೊಡೆದಿದೆ. ಈ ಘಟನೆಗಳು ರಸ್ತೆ ಸುರಕ್ಷತೆಯ ಕುರಿತು ಆತಂಕ ಮೂಡಿಸಿವೆ. ಉಡುಪಿ/ ರಾಯಚೂರು, ಜನವರಿ 23: ಖಾಸಗಿ ಬಸ್​​ ಮತ್ತು ಕ್ರೂಸರ್​ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟರೆ, 8 ಮಂದಿ ಪ್ರಯಾಣಿಕರು ಗಂಭೀರವಾಗಿ […]

ಕರ್ನಾಟಕದ ಕಾರ್ಖಾನೆಗೆ ಒಡಿಶಾ ಕಂಪನಿ ಹೆಸರು: ಸಿಡಿದೆದ್ದ ಮಂಗಳೂರಿಗರು

ಎಂಸಿಎಫ್ ಕಾರ್ಖಾನೆಯ 55 ವರ್ಷದ ಹೆಸರು ಬದಲಾವಣೆಯಿಂದ ಮಂಗಳೂರಿನಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ಒಡಿಶಾ ಮೂಲದ ಪ್ಯಾರಾದೀಪ್ ಪಾಸ್ಫೇಟ್ ಕಂಪೆನಿ ತನ್ನ ಷೇರು ಪಡೆದಿರುವ ‘ಮಂಗಳೂರು ಕೆಮಿಕಲ್ ಆಂಡ್ ಫರ್ಟಿಲೈಸರ್ಸ್’ ಹೆಸರನ್ನು ಬದಲಾಯಿಸಿದೆ. ಇದು ಸ್ಥಳೀಯರ ಅಸ್ಮಿತೆಗೆ ಧಕ್ಕೆ ತಂದಿದೆ ಎಂದು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೋರಾಟಕ್ಕೆ ಮುಂದಾಗಿದ್ದಾರೆ. ಮಂಗಳೂರು, ಜನವರಿ 22: ಎಂಸಿಎಫ್​​ ಅಂದರೆ Mangaluru chemical and Fertilizer. ಮಂಗಳೂರಿನ (Mangaluru) ಪಣಂಬೂರಿನಲ್ಲಿ ಕಳೆದ 55 ವರ್ಷದಿಂದ ಇದೇ ಹೆಸರಿನಲ್ಲಿ ‌ಕಾರ್ಖಾನೆ‌ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಇದೀಗ ಕಾರ್ಖಾನೆಯ ಹೆಸರು […]

  • 1
  • 2